Monday, May 7, 2012

ಇಷ್ಟ ಕಷ್ಟಗಳ ನಡುವೆ

ಕಷ್ಟ ಪಡುವುದಾದರೆ ಇಷ್ಟಪಡಬೇಕು
ಇಷ್ಟಪಟ್ಟಮೇಲೆ ಕಷ್ಟ ಮರೀಬೇಕು
ಇಷ್ಟ-ಕಷ್ಟಗಳ ನಡುವೆ ಸ್ಪಷ್ಟ ಧ್ಯೇಯವಿರಲು
ಕ್ಲಿಷ್ಟವಾದರೂ ಸರಿಯೆ ಗುರಿ ದಕ್ಕಬೇಕು . . . !!!

Saturday, August 14, 2010

ಕಲ್ಪನೆಯ ಹುಡುಗಿ


ಅವಳ ಬಗ್ಗೆ ಯೋಚಿಸಲು ಭಾವನೆಗಳು ಮುಟ್ಟುವವು ಅತಿರೇಖ,
ನೆನಪು ಕೊಡುವುದು ಸಹಿಸಲಾರದ ಶಾಖ,
ಮಳ್ಳಿಯ ಚಿಂತನೆಯೇ ಆಗಿದೆ ನನಗೆ ಶೋಕಿ,
ಓಡಿ ಬರುವಳು ಕಲ್ಪನೆಯ ಕದವನು ಜೋರಾಗಿ ನೂಕಿ.

ವಿಸ್ಮಯಕಾರಿ ಒಲವು

ನೋಡುತಲೇ ನೋಡುತಲೇ ಇರಬೇಕಾದ ಚೆಲುವು
ಅರಳುತಿದೆ ಅರಳುತಿದೆ ವಿಸ್ಮಯಕಾರಿ ಒಲವು
ಕಣ್ಣುಗಳು ಕಮಲಗಳು, ನೆರಳಿಗೆ ಕಾಮನ ಬಿಲ್ಲು
ಕುಣಿಯುತಿದೆ ಮುಂಗುರುಳು, ಆಗಿ ನಾಟ್ಯದ ನವಿಲು. . .

ನಿಮ್ಮ ನಗು

ಅರಿಯೆನು ನಾನು ಏನಿದೆ ನಿಮ್ಮ ನಗುವಲಿ,
ನೋಡಿದರೆ ಆಗುವ ಸಂತೋಷವನು ಹೇಗೆ ತಾನೇ ಹೇಳಲಿ?
ಇರುಳಿನ ಸೌಂದರ್ಯಕೆ ಚಂದಿರನೇ ಕಾರಣ,
ನಿಮ್ಮ ಪ್ರೀತಿ ತುಂಬಿದ ಮೊಗಕೆ ನಗುವೇ ಭೂಷಣ.